Tuesday, July 29, 2008

ಪುನರ್ಮಿಲನ ----- ಭಾಗ 2

ಹೊರಗಡೆ ಬಿಸಿಲು ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಈಗ ಕೆಲಸ ಮಾಡುವ mood ಇಲ್ಲ. ನನ್ನ ಕಥೇನಾ ಮುಂದುವರೆಸುತ್ತೇನೆ..

ರಾಧೆಯ ಜೀವನದಿಂದ ಅವಳ ಶ್ಯಾಮಾ ಹೋದಮೇಲೆ ಅವಳ ಬದುಕೇ ಬರದಾದಂತಾಯಿತು. ಅಸಹನೀಯ, ಅವರ್ಣನೀಯ ನೋವು ದುಃಖ. ಅವಳ ಈ ಪ್ರೇಮದ ಕಥೆ ಅವಳ ಸ್ನೇಹಿತರಿಗಾಗಲಿ ಅಥವಾ ಮನೆಯವರಿಗಾಗಲಿ ಗೊತ್ತಿರಲಿಲ್ಲ. ಹೀಗಾಗಿ ಯಾರೊಂದಿಗೂ ಹೇಳಿಕೊಳ್ಳಲು ಆಗದ ಸ್ಥಿತಿ. ಇವಿಷ್ಟು ಸಾಲದಕ್ಕೆ ಸೋತ ಅನುಭವ, ಅದರಿಂದ ಹತಾಶೆ ಹಾಗು ಸೇಡಿನ ಭಾವ.

ತುಂಬ ಪ್ರೀತಿಸಿದ್ದಳು, ಕುರುಡಾಗಿ ನಂಬಿದ್ದಳು ಅವನನ್ನು . ಈಗ ಅವನನ್ನು ಹೀಗಳೆಯಲು ಸಹ ಅವಳಿಗೆ ಆಗುತ್ತಿಲ್ಲ. ತನ್ನ ದುರಾದೃಷ್ಟವನ್ನು ತಾನೆ ಶಪಿಸುತ್ತ "life must go on" ಅಂತ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದಳು.

ಈ ಮನಸ್ಸು ತುಂಬಾ ಪಾಪಿ ಕಣ್ರೀ... ಯಾವುದು ಬೇಡವೋ ಯಾವುದನ್ನು ಮರೆಯಬೇಕೂ ಅದನ್ನೇ ಪುನಃ ಜ್ಞಾಪಿಸುತ್ತದೆ...ರಾಧಾ ಕೂಡ ಹೊರತಾಗಿರಲಿಲ್ಲ. ಅವಳು ಅವನಿಂದ ಅವನ ನೆನಪಿನಿಂದ ಎಷ್ಟು ದೂರ ಹೋಗಲು ಪ್ರಯತ್ನಿಸಿದರೂ ಅವಳ ಮನಸ್ಸು, ಹೃದಯ ಅವನಲ್ಲಿಗೆ ಎಳಿಯುತಿತ್ತು.

ಅವಳ ದಿನಚರಿ monotonous! ಏಕತಾನತೆ. ಅವಳ ಉದ್ಯೋಗ ಅವಳಿಗೆ ಸ್ವಲ್ಪ ನೆಮ್ಮದಿ ಕೊಟ್ಟಿತು. ಆದರೂ ಮತ್ತದೇ ಬೇಸರ, ಜಿಗುಪ್ಸೆ. ಆತ್ಮಹತ್ಯೆಯ ವಿಚಾರ ಕೂಡ ಹಾಗೆ ಮನಸಲ್ಲಿ ಸುಳಿದಿತ್ತು. ಆದರೆ ಅವಳನ್ನೇ ತನ್ನ ಸರ್ವಸ್ವ ಎಂದು ಬದುಕುತ್ತಿರುವ ಅಪ್ಪ ಅಮ್ಮ, ಅವಳನ್ನು ತಾಯಿಗಿಂತ ಹೆಚ್ಚಿನ ಅಕ್ಕರೆಯಿಂದ ನೋಡುವ ಅಕ್ಕ ಹೀಗೆ ಇವರೆಲ್ಲರ ಮೋಹ ಪಾಶ ಅವಳನ್ನು ಆತ್ಮಹತ್ಯೆ ಯೋಚನೆ ಇಂದ ವಿಮುಖಳಾಗಿಸಿತು. ಒಂದು ಮೋಹ ಸಾವಿನ ಆಲೋಚನೆ ತಂದರೆ ಇನ್ನೊಂದು ಮೋಹ ಬದುಕುವ ಕಾರಣ ತೋರಿತು.

ಅವನ ನೆನಪು ಬಂದ ಕೂಡಲೇ ನೋವಿನ ಹನಿಗಳು ಇವಳನ್ನು ನೋಡಿ ಹಾಸ್ಯ ಮಾಡಲೋ ಎಂಬಂತೆ ಹೊರಬರುತ್ತಿತ್ತು. ಎಲ್ಲೆಂದರಲ್ಲಿ ಅಳುವ ಸ್ವಾತಂತ್ರವಿಲ್ಲ. ಪರಿಚಯದವರ ಪ್ರಶ್ನೆ ಎದುರಿಸುವ ಸಾಮರ್ಥ್ಯ ಸಹನೆ ಇಲ್ಲವೇ ಇಲ್ಲ. ಆದರೆ ದುಃಖ ಹೊರಬರಬೇಕಲ್ಲವೇ. ಅದಕ್ಕೆ ಅವಳ ನೆರವಿಗೆ ಬಂದದ್ದು ಇರುಳು. ರಾತ್ರಿ ಎಲ್ಲ ಕಡೆ ಕತ್ತಲು ತುಂಬಿದ ಮೇಲೆ ಎಲ್ಲರೂ ನಿದ್ರಾ ದೇವಿಗೆ ಶರಣಾರ್ತಿಗಳಾದ ಮೇಲೆ, ಇವಳು ತನ್ನ ದುಃಖವನ್ನು ಹೊರಗೆಡವುತಿದ್ದಳು. ಅವಳಿಗೆ ಅವಳ ತಲೆಯ ದಿಂಬು ಆಸರೆ. ಅವಳ ಕಣ್ಣೀರನ್ನು ತನ್ನೊಳಗೆ ಸೇರಿಸಿ ಅವಳ ದುಃಖವನ್ನು ಕಡಿಮೆ ಮಾಡುತಿತ್ತು.

ಶ್ಯಾಮಾ ರಾಧೆಯನ್ನು ಮರೆತಿದ್ದನೋ ಇಲ್ಲವೊ ಆದರೆ ರಾಧೆ ಶ್ಯಾಮನನ್ನು, ಅವಳ ಶ್ಯಾಮನನ್ನು ಮರೆತು ಕೂಡ ಮರೆಯಳಾರಲು

ಮುಂದುವರೆಯುತ್ತದೆ .......

Wednesday, July 23, 2008

ಬದುಕು ....... ಬವಣೆ

ಬದುಕು ....... ಬವಣೆ

(ಇದು ಕೂಡ ಅಲ್ಲಿಂದ ಇಲ್ಲಿಗೆ copy paste :-)....)

ಏನೆಂದು ನಾನು ಹೇಳಲಿ ಏನೆಂದು ನಾನು ಬಣ್ಣಿಸಲಿ

ಮೊದಲಿಲ್ಲದ ಕೊನೆ ಕಾಣದ ಬವಣೆಯ

ಸಾವಿರ ಭಾವನೆ ಬಿಚ್ಚಿಡುವ ಬಯಕೆ ನನಗೆ
ಮನದಾಳದ ನೋವಿನ ಸ್ವಾಗತ ಮೊದಲಿಗೆ

ಆದರೂ ನಿಮ್ಮೆದುರಿಗೆ ತೆರೆದಿಡುವ ಧೈರ್ಯ ಮಾಡಿರುವೆ
ನನ್ನ ಮನಸಿನ ಸಕ್ಷಾತ್ಕಾರ ಮಾಡ ಬಯಸಿರುವೆ

ಪ್ರೀತಿಯಲ್ಲಿ ಅರಳಿದ ಮುಂಜಾವಿನ ದಿನಗಳನ್ನು ಹೇಳಲೇ
ಅಥವ ವಿಯೋಗದ ಮುಸ್ಸಂಜೆಯ ತೋರಿಸಲೇ

ಮಿತಿ ಇಲ್ಲದ ಪ್ರೀತಿ ಕೊಟ್ಟೆ
ಏಣೆ ಇಲ್ಲದ ನೋವ್ವ ಪಡೆದೆ

ಕಣ್ಣಿರಿನ ಸಾಗರದಲ್ಲಿ ತೇಲುತ್ತಿರುವ ಈ ಜೀವನ
ಅವನೇ ತೀರವೆಂದು ಸೇರಲು ಪರಿತಪಿಸುದುತ್ತಿದೆ ಈ ಜೀವ

ಶಪಿಸುತ್ತಿದೆ ಪ್ರೀತಿಯ ಹೃದಯ ನನ್ನ
ಅವನಿರದ ಓಂಟಿತನವನ್ನ

ತ್ಯಾಗದ ಹೆಸರಾಗಲು ಕೊಂದುಕೊಂಡೆ ನನ್ನನ್ನೇ
ಮೇಣದ ಬತ್ತಿಯಂತೆ ಬೆಳಕನಿತ್ತು ಅಂಧಕಾರದಲ್ಲೇ ಉಳಿದೆ

ತೀರಸೇರುವುದು ಭ್ರಹ್ಮೆಯಾದರೂ ಸೋಲೊಪ್ಪಿಕೊಳ್ಳದ ನಾನು
ಈಜುತ್ತಿರುವೆ ಕೈಕಾಲಿಲ್ಲದೆ ಅವನ ಸೇರಲು

ಭ್ರಹ್ಮೆಯಿಂದ ಹೊರಬಂದು ಮಾಡುವುದಾದರು ಎಂತು
ಇರುವೆನು ನಲಿವಿನ ಆ ದಿನಗಳ ನೆನಪಿನಲ್ಲೇ ಎಂದೆಂದು

ಎಂದು ಸೇರುವೆನೋ ಇನಿಯನನ್ನು ಎಂದೆನ್ನ ಕೆಳದಿರಿ
ಭುವಿಯಾಗಸ ಸೇರಿದನ್ದೇ ಎಂದೆನ್ನದಿರಿ

ಪ್ರೀತಿ ------ ತ್ಯಾಗ????????

(ಇದು ನನ್ನ ಇನ್ನೊಂದು ತಾಣದಲ್ಲಿ ಬ್ಲಾಗ್ ಮಾಡಿದುನ್ನ ಇಲ್ಲಿಗೆ ರವಾನಿಸುತಿದ್ದೇನೆ....)

ಬ್ಲಾಗ್ಮಾಡ್ಬೇಕಂತ ಅನ್ದ್ಕೊಂಡಾಗ ಯಾವ ವಿಷಯ ಬರೆಯೋದಪ್ಪ ಅಂತ ತುಂಬ ಯೋಚಿಸಿದೆ. ಹೊಳಿಲೇಯಿಲ್ಲ. ಅದಿಕ್ಕೆ ಒಂದು ಪ್ರೇಮಗಾಥೆಯನ್ನೇ ಹೇಳುವ ಅಂತ, ಯಾರದೋ ಕಥೆ, ಯವುದೋ ಕಾಲ್ಪನಿಕ ಪಾತ್ರ ಊಹಿಸಿ ಹೇಳೋದಿಕ್ಕಿಂತ ನನ್ನ ಅನುಭವವನ್ನೆ ಹೇಳುವುದು ವಾಸಿ. (ನನ್ನ ಪ್ರೇಮ ಕಥೆಯಲ್ಲ ....ನನ್ನ ಗೆಳತಿಯ ಪ್ರೇಮ ಕಥೆ....ಅವಳ ಜಾಗದಲ್ಲಿ ನಾನು ನಿಂತು ಈ ಬ್ಲಾಗನ್ನು ಬರೆಯುತ್ತಿದ್ದೇನೆ)

ನಾನು ಎಲ್ಲರಂತೆ ಪ್ರೀತಿ ಪ್ರೇಮ ಹಾಗಿರ್ಬೇಕು ಹೀಗಿರ್ಬೇಕು ಅಂತ ಕನಸು ಕಂಡವಳು . ಸ್ವಲ್ಪ creditu TV cinemaಗು ಸೇರತ್ತೆ ಅನ್ನಿ Smiling. ಪರಿಚಯ ಹೇಗಾಯ್ತು ಅಂದ್ರೇ......ಅಯ್ಯೋ ಬೇಡ ಬೇಡ ಅದು ತುಂಬಾ ದೊಡ್ಡ ಕಥೆ ಇನ್ಯಾವಾಗ್ಲಾದ್ರು ಹೇಳ್ತಿನಿ.

ಪ್ರೀತಿ ಪ್ರೇಮ ಅಂತ ಬೀದಿ ಬೀದಿ ಸುತ್ತಿಲ್ಲ, ಪಾರ್ಕು cinemaಗೆ ಹೋಗ್ಲಿಲ್ಲ. ಅಪರೂಪಕ್ಕೆ restaurantಗೆ ಹೊಗಿದ್ವಿ. ನಮ್ಮ ಪ್ರಕಾರ ಇವೆಲ್ಲ ಪ್ರೀತಿಸಿದವರು ಮಾದಲೆಬೇಕೆನ್ದಿರ್ಲಿಲ್ಲ. ಇಬ್ಬ್ರಲ್ಲು ಪ್ರೀತಿ ಸಣ್ಣದಾಗಿ ಶುರುವಾಗಿದ್ದು ನಿಧಾನವಾಗಿ ಮರವಾಗ್ತಾ ಇತ್ತು. ಯಾವಾಗ 3 ವರ್ಷ ಆಯ್ತು ಗೊತೇ ಆಗ್ಲಿಲ್ಲ. ನಾನು ನನ್ನ ಕೆಲ್ಸದಲ್ಲಿ ತಲ್ಲೀನೆ ಅವನು ಅವನದ್ರಲ್ಲಿ.

ಮದುವೆ ಆಸೆ ಆವಗ ಇನ್ನು ಚಿಗುರ್ಲಿಲ್ಲ ಅಥವ ನಿಧಾನವಾಗಿ ಆದ್ರೆ ಆಯ್ತು, ಅವನು ನನಗಾಗೆ ಇರ್ತಾನೆ ಅನ್ನೊ ಅಪಾರ ನಂಬಿಕೆ over-confidence ಕೂಡ. ಆದರೆ ಯಾಕೋ ಆ ದೇವ್ರಿಗೆ ನನ್ನ ನೆಮ್ಮದಿ ಇಷ್ಟ ಆಗ್ಲಿಲ್ಲ ಅನ್ಸತೆ ಅದಿಕ್ಕೆ ಅವನ ಆಟ ತೊರ್ಸೊದಿಕ್ಕೆ ಶುರು ಮಾಡ್ದ.

ದೇವರ ಆಟ ಬಲ್ಲವರಾರು.......ನಿಜ ಅಲ್ವ? ನನ್ನದು ಅನ್ದ್ಕೊನ್ದಿಡ್ದ ಜೀವ ಬೇರೆಯವರದಾಯ್ತು Sad. ತುಂಬಾ ಸಂಕಟ, ಯಾತನೆ, ನೋವು ಹೀಗೆ......ವರ್ಣಿಸೊದಿಕ್ಕೆ ಪದಾನೇ ಇಲ್ಲ....
ತಂದೆ ತಾಯಿಗಿಂತ ಹೆಚ್ಚಲ್ಲದಿದ್ದರೂ, ಅವರ ಪ್ರತಿಷ್ಟೆಗಿಂತ ಕಡಿಮೆನಾ ಪ್ರೀತಿ?ಪ್ರೀತಿ ಧೈರ್ಯ ಕೊಡತ್ತೆ ಅಂತಾರೆ ಆದರೆ ಇವನಿಗೆ ಯಾಕೆ ಕೊಡ್ಲಿಲ್ಲ? ಇನ್ನು ಹಲವಾರು ಉತ್ತರವಿಲ್ಲದ ಪ್ರಶ್ನೆಗಳು.

ಅವನಿಗೆ ತಾನು ಕೂಡ ತ್ಯಾಗ ಮಾಡಿದ ಭಾವನೆ ಇರಬೇಕು. ಆದರೆ ನಿಜವಾಗಿ ತ್ಯಾಗ ಮಾಡಿದ್ದು ಯಾರು? ತನ್ನವರಿಗೆ ನನ್ನನು ಬಿಟ್ಟ ಅವನಾ ಅಥವ ಅವನಿಗಾಗಿ ನನ್ನನೇ ಬಿಟ್ಟುಕೊಟ್ಟ ನಾನ ಗೋತ್ತಿಲ್ಲ. ತ್ಯಾಗ ಮೂರ್ತಿ ಅನ್ನೊ ಪಟ್ಟಾನು ನನ್ಗೆ ಬೇಡ.....

ಪ್ರೀತಿ ಅಂದ್ರೆ ಇಷ್ಟೇನಾ, ಯಾರದೋ ಜೀವನ ಬಲಿ ಕೊಟ್ಟು ಇನ್ಯಾರದೋ ಹಸನಾಗಿಸೋದು... ಅವನಿಗೆ ನಾನು ರಾಧೆಯಾಗಿ ಉಳಿದೆ...ಆದರು ಎಲ್ಲೊ ಬೇರೆಯವರಿಗೆ ನೋವು ಮಾಡದೆ ಒಂದು ಘಟ್ಟ ಮುಗಿಸಿದೆ ಅನ್ನೋ ಸಾರ್ಥಕತೆ Smiling.....

ಹಾಡು ಹಳೆಯದಾದರೇನು ಭಾವ ನವ ನವೀನ.....ಹಾಗೆ ಪ್ರೇಮ ಕಥೆಯಾದ್ರು ಭಾವ,ತ್ಯಾಗ ಬೇರೆ ಬೇರೆನೇ.....

ಒಂದನ್ತು ಸತ್ಯ ಪ್ರೀತಿ ಮಧುರ ತ್ಯಾಗ ಅಮರ ಇರ್ಬಹುದು ಆದರೆ ನನಗೆ ಎರಡೂ ಅಮರ ಮತ್ತು ಮಧುರ Smiling

Tuesday, July 1, 2008

ಪುನರ್ಮಿಲನ ----- ಭಾಗ 1

"ಇವತ್ತಿಗೆ ಎಲ್ಲಾ ಮುಗೀತು" ಅಂತ ರಾಧಾ ನಿಟ್ಟುಸಿರು ಬಿಡುತ್ತಾ train ಇಂದ ಇಳಿದಳು.

"ಛಿ ಈ ೪.೩೦ ಟ್ರೈನ್ ಯಾವಾಗಲು ಹೀಗೇನೆ, ಜನಾ ತುಂಬಿರ್ತಾರೆ ನೂಕುನುಗ್ಗಾಟ ಸಾಕಪ್ಪಾ ಸಾಕು. ಇನ್ಮೇಲೆ ಈ ಟ್ರೈನಲ್ಲಿ ಬರಬಾರದು". ಈ ರೀತಿ ಅವಳು ಎಷ್ಟು ಸಲಾ ಅಂದುಕೊಂಡಿದ್ದಾಲೋ. ಆದರು ಪ್ರತಿ ಸಲ ಈ ಟ್ರೈನ್ ನಲ್ಲೆ ಬರೋಹಾಗೆ ಆಗತ್ತೆ. ಈ ಟ್ರೈನ್ ನಲ್ಲಿ ದುಡ್ಡು ಕಡಿಮೆ ಇದ್ದರೂ, ದೊಡ್ಡ software ಉದ್ಯೋಗಿ ಆದ ಅವಳಿಗೆ ದುಡ್ಡಿನ ಕೊರತೆ ಅಷ್ಟೇನೂ ಇಲ್ಲ. ಆದರೆ ಇವಳ ತಾಯಿಗೆ ವ್ಯರ್ಥವಾಗಿ ದುಡ್ಡು ಹಾಳು ಮಾಡೋದು ಇಷ್ಟವಿಲ್ಲ. ಹೀಗಾಗಿ ಪ್ರತಿ ಭಾನುವಾರ ಈ ಸಂಕಟ.

ಸರಿ ಹೇಗೊ ಬೆಂದಕಾಳುರಿನ ರೈಲು ನಿಲ್ದಾಣದಿಂದ ಹೊರಬಂದಳು. ಇಷ್ಟು ಜನ ಜಂಗುಳಿ ಇದ್ದರು ಏಕೋ ತಾನು ಒಂಟಿ. ತನ್ನ ಜಗತ್ತು ಸ್ತಬ್ಧವಾದಂತಾ ಭಾವ, ಮನಸಿನಲ್ಲಿ ಏನೋ ದುಗುಡ. ತನ್ನ ಪ್ರಿಯಕರನ ಮದುವೆಯ ದಿನ ಪ್ರೇಯಸಿಗಾಗುವ ಇಂತಹ ಭಾವನೆಗಳು ಅಸಹಜವೇನಲ್ಲ.

ಹೌದು ಇವತ್ತು ತನ್ನ ಸರ್ವಸ್ವ ಅಂದುಕೊಂಡಿದ್ದ ಕೃಷ್ಣನ ಮದುವೆ... ಅದು ಈ ರಾಧೆ ಯನ್ನು ಬಿಟ್ಟು ಯಾರೋ ರುಕ್ಮಿಣಿ ಜೊತೆ...
ದ್ವಾಪರದಲ್ಲಿ ಆ ಕೃಷ್ಣ ತನನ್ನು ಪ್ರೀತಿಸಿದ ರಾಧೆಯನ್ನು ಗೊಕುಲದಲ್ಲಿಯೇ ಬಿಟ್ಟು ಹೋದ, ಈಗ ಕಲಿಯುಗದಲ್ಲಿ ಈ ಕೃಷ್ಣ.......ಎಂಥಹ ಕಾಕತಾಳೀಯ.....


majestic ನಲ್ಲಿ ತನ್ನ ಮನೆಗೆ ಬಸ್ಸೇ ಇಲ್ಲ....ಯಾಕೋ ಹಣೆಬರಹವೇ ಚೆನ್ನಾಗಿಲ್ಲ ಅಂತ ಕಾದು, ಸಿಕ್ಕ ಬಸ್ಸಿನಲ್ಲಿ ಹೇಗೋ ಜಯನಗರ ತಲುಪಿದಳು. ಬಸ್ ಸ್ಟಾಪ್ ಇಂದ ಮನೆ ತುಂಬ ದೂರ ಏನು ಇರಲಿಲ್ಲ. ಆದರೂ ಇವತ್ತು ಯಾಕೋ ತುಂಬ ದೂರ, ಕಾಲು ಯಾಕೋ ಬರಲೊಲ್ಲೆ ಅನ್ತ್ತಿದೆ.....ಇನ್ನೇನು ತಲುಪಿದೆ ಅನ್ನೋವಾಗ ತಕ್ಷಣ ಕರೆಂಟ್ ಹೋಯ್ತು.... ಅವಳೊಳಗೂ ಕತ್ತಲೆ ಹೊರಗೂ ಕತ್ತಲೆ .. ಅಲ್ಲೇ phone booth ಕಾಣಿಸುತ್ತದೆ ...ಅವನ ಧ್ವನಿ ಕಡೆಯದಾಗಿ ಕೇಳಬೇಕೆಂಬ ಬಯಕೆ ಇದಕಿದ್ದ ಹಾಗೆ ಜಾಗೃತ ವಾಗುತ್ತದೆ .... ತನ್ನ ಮೊಬೈಲ್ ಇಂದ ಕಾಲ್ ಮಾಡುದ್ರೆ ಅವ ಕಂಡಿತ ಪಿಕ್ ಮಾಡೊಲ್ಲ , ಈ phone boothe ಗಟ್ಟಿ ಇವಳಿಗೆ.....

ಸರಿ number dial ಮಾಡಿದ ತಕ್ಷಣ hello ಅಂತ ಧ್ವನಿ ... ಹೌದು ಇದು ಅವನದೇ ಧ್ವನಿ.. ನನ್ನ ಬಿಟ್ಟು ಇವನನ್ನ ಯಾರು ತಾನೆ ಇಷ್ಟು ಅರ್ಥ ಮಾಡಿಕೊಳ್ಳ ಬಲ್ಲರು ಅನ್ನೋ ಗರ್ವ ಹಾಗೆ ಕಣ್ಣಲ್ಲಿ ಸಣ್ಣ ನೀರು ....."ಮದುವೆಯ ಈ ಬಂಧಾ , ಅನುರಾಗದ ಅನುಬಂಧಾ......" ಈ ಹಾಡು ಕೂಡ ಕಿವಿಗೆ ಬೀಳತ್ತೆ... !!ಆರತಕ್ಷತೆ!! ....ಕಣ್ಣಲ್ಲಿ ಧಾರಾಕಾರ ನೀರು.....ಯಾಕೋ ಮಾತುಗಳು ಗಂಟಲಿನ ಸಮಾಧಿ ಇಂದ ಹೊರಬರುತಿಲ್ಲ.....ಆ ಕಡೆ ಇಂದ ಉತ್ತರ ಬರದಿದ್ದ ಕಾರಣ phone disconnect ಆಗತ್ತೆ.....

ಹಾಗೆ ಅವಳ ಅವನ ಜೀವನ ಕೂಡ ಇಂದಿನಿಂದ DISCONNECTED............

(ಮುಂದುವರೆಯುತ್ತದೆ........)